Homeನ್ಯೂಸ್NATION EXCLUSIVEಮದುವೆ ವಿಚಾರದಲ್ಲಿ ಪವನ್ ಕಲ್ಯಾಣ್‌ಗೆ ಅದೃಷ್ಟ ಕೈಕೊಟ್ಟಿದ್ಯಾ?

ಮದುವೆ ವಿಚಾರದಲ್ಲಿ ಪವನ್ ಕಲ್ಯಾಣ್‌ಗೆ ಅದೃಷ್ಟ ಕೈಕೊಟ್ಟಿದ್ಯಾ?

 

ತೆಲುಗು ಚಿತ್ರರಂಗದ ಪವರ್‌ಸ್ಟಾರ್.. ರಾಜಕೀಯ ಅಖಾಡದಲ್ಲಿ ಜನಸೇನಾ ನಾಯಕ.. ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್. ಸಿನಿಮಾದಲ್ಲಿ ಪ್ರೇಮಕಥೆಗಳಿಗೆ ಜೀವ ತುಂಬಿದ ಈ ನಾಯಕನ ನಿಜ ಜೀವನದ ವೈವಾಹಿಕ ಪಯಣ ಮಾತ್ರ ಹಲವು ಏರಿಳಿತಗಳಿಗೆ ಸಾಕ್ಷಿಯಾಗಿದೆ. ಮೊದಲ ಮದುವೆ ಮುರಿದುಬಿತ್ತು.. ಎರಡನೇ ಮದುವೆಯೂ ವಿಚ್ಛೇದನದಲ್ಲಿ ಅಂತ್ಯವಾಯಿತು.. ಇದೀಗ ಮೂರನೇ ದಾಂಪತ್ಯದಲ್ಲೂ ಪ್ರತ್ಯೇಕವಾದ ಘೋಷಣೆ ಹೊರಬಿದ್ದಿದೆ. ಹಾಗಾದ್ರೆ ಪವನ್ ಕಲ್ಯಾಣ್ ಅವರ ಮೂರು ಮದುವೆಗಳ ಹಿಂದಿನ ಕಥೆಯೇನು? ಬನ್ನಿ ನೋಡೋಣ ಈ ವಿಶೇಷ ವರದಿ.

ಮೊದಲ ಮದುವೆ ಹೆಚ್ಚು ದಿನ ಇರಲಿಲ್ಲ 

1997.. ಪವನ್ ಕಲ್ಯಾಣ್ ವೈವಾಹಿಕ ಬದುಕಿನ ಮೊದಲ ಅಧ್ಯಾಯ ಆರಂಭವಾಗಿದ್ದು ನಂದಿನಿ ಅವರೊಂದಿಗೆ. ಹಿರಿಯರ ನಿರ್ಧಾರದಂತೆ ನಡೆದ ಈ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ. ಮದುವೆಯಾದ ಕೆಲವೇ ವರ್ಷಗಳಲ್ಲಿ ಇಬ್ಬರೂ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದರು. ಕೊನೆಗೆ 2008ರಲ್ಲಿ ಕಾನೂನುಬದ್ಧವಾಗಿ ವಿಚ್ಛೇದನ ಪಡೆದುಕೊಂಡರು. ಹೀಗೆ ಪವನ್ ಕಲ್ಯಾಣ್ ಅವರ ಮೊದಲ ದಾಂಪತ್ಯ ಜೀವನ ಅಂತ್ಯಗೊಂಡಿತ್ತು.

ಎರಡನೇ ಮದುವೆ ನಿಲ್ಲಲೇ ಇಲ್ಲ 

ಇದಾದ ಬಳಿಕ ಪವನ್ ಕಲ್ಯಾಣ್ ಬದುಕಿನಲ್ಲಿ ಕಾಣಿಸಿಕೊಂಡಿದ್ದು ನಟಿ ರೇಣು ದೇಸಾಯಿ. ಸಿನಿಮಾದಲ್ಲಿ ಪರಿಚಯವಾದ ಇವರಿಬ್ಬರ ನಡುವೆ ಪ್ರೀತಿ ಬೆಳೆದಿತ್ತು. 2004ರಲ್ಲಿ ಇವರಿಗೆ ಅಖಿರಾ ನಂದನ್ ಜನಿಸಿದ್ದರು. 2009ರಲ್ಲಿ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನಂತರ ಮಗಳು ಆಧ್ಯಾ ಜನಿಸಿದಳು. ಆದರೆ ಈ ಸಂಬಂಧವೂ ಹೆಚ್ಚು ಕಾಲ ಮುಂದುವರಿಯಲಿಲ್ಲ. 2012ರಲ್ಲಿ ಇಬ್ಬರೂ ಪ್ರತ್ಯೇಕವಾದರು. ಈ ಮದುವೆಯೂ ವಿಚ್ಛೇದನದಲ್ಲಿ ಅಂತ್ಯಗೊಂಡಿತು.

ಮೂರನೇ ಮದುವೆ

ಇನ್ನು ಮೂರನೇ ಅಧ್ಯಾಯ ಆರಂಭವಾಗಿದ್ದು ರಷ್ಯಾ ಮೂಲದ ಅನ್ನಾ ಲೆಜಿನೋವಾ ಅವರೊಂದಿಗೆ. 2011ರಲ್ಲಿ ‘ತೀನ್ ಮಾರ್’ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಅನ್ನಾ ಪರಿಚಯವಾಗಿದ್ದರು. ಪರಿಚಯ ಪ್ರೀತಿಗೆ ತಿರುಗಿ 2013ರ ಸೆಪ್ಟೆಂಬರ್ 30ರಂದು ಇಬ್ಬರೂ ಮದುವೆಯಾದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇದೀಗ ಮೂರನೇ ಮದುವೆಯೂ ಮುರಿದುಬಿದ್ದಿದೆ. ಪವನ್ ಕಲ್ಯಾಣ್ ಅವರ ವೈಯಕ್ತಿಕ ಬದುಕಿನಲ್ಲಿ ಯಾಕೆ ಹೀಗೆ ಎಂಬ ಪ್ರಶ್ನೆ ಎದ್ದಿದೆ.

ಪವನ್ ಅವರದ್ದೇ ಮಾತು..

2023ರಲ್ಲಿ ನಟ ನಂದಮೂರಿ ಬಾಲಕೃಷ್ಣ ನಡೆಸಿಕೊಟ್ಟ ‘ಅನ್‌ಸ್ಟಾಪಬಲ್’ ಕಾರ್ಯಕ್ರಮದಲ್ಲಿ ತಮ್ಮ ಮೂರು ಮದುವೆಗಳ ಕುರಿತು ಪವನ್ ಕಲ್ಯಾಣ್ ಮುಕ್ತವಾಗಿ ಮಾತನಾಡಿದ್ದರು. ತಾನು ಬ್ರಹ್ಮಚಾರಿಯಾಗಿಯೇ ಉಳಿಯಬೇಕು, ಯೋಗದ ಹಾದಿಯಲ್ಲಿ ಸಾಗಬೇಕು ಎಂದು ಬಯಸಿದ್ದೆ. ಆದರೆ ಜೀವನದಲ್ಲಿ ಎಲ್ಲವೂ ಅಂದುಕೊಂಡಂತೆ ನಡೆಯಲಿಲ್ಲ ಎಂದು ಹೇಳಿದ್ದರು. ಮೂರು ಮದುವೆಗಳನ್ನು ಒಂದೇ ಸಮಯದಲ್ಲಿ ಮಾಡಿಕೊಂಡಿಲ್ಲ, ಒಂದು ಸಂಬಂಧ ಸರಿಹೋಗದಿದ್ದಾಗ ಮತ್ತೊಂದು ಮದುವೆಯಾಯಿತು. ಈ ವಿಚಾರದಲ್ಲಿ ನೋವೂ ಇದೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದರು.

ಪವನ್ ಕಲ್ಯಾಣ್ ಬದುಕಿನಲ್ಲಿ ಆಗ್ತಿರೋದೇನು?

2026ರ ನವೆಂಬರ್ 9ರಂದು ಪವನ್ ಕಲ್ಯಾಣ್ ಮತ್ತು ಅನ್ನಾ ಲೆಜಿನೋವಾ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಮತ್ತು ಗೌರವದೊಂದಿಗೆ ಪ್ರತ್ಯೇಕವಾಗಿ ಬದುಕಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ತಮ್ಮ ವೈವಾಹಿಕ ಸಂಬಂಧ ಅಂತ್ಯಗೊಂಡಿದ್ದರೂ ಉತ್ತಮ ಸ್ನೇಹಿತರಾಗಿ ಉಳಿಯುತ್ತೇವೆ. ಮಕ್ಕಳ ಸಂತೋಷ ಮತ್ತು ಭವಿಷ್ಯವೇ ನಮ್ಮ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ವೈಯಕ್ತಿಕ ಬದುಕಿನ ನಿರ್ಧಾರವನ್ನು ಗೌರವಿಸುವಂತೆ ಅಭಿಮಾನಿಗಳಿಗೂ ಮನವಿ ಮಾಡಿದ್ದಾರೆ.

ಕೊನೆಯದಾಗಿ

ಒಂದು ಕಡೆ ರಾಜಕೀಯದಲ್ಲಿ ಹೊಸ ಜವಾಬ್ದಾರಿ.. ಮತ್ತೊಂದು ಕಡೆ ವೈಯಕ್ತಿಕ ಬದುಕಿನಲ್ಲಿ ಮತ್ತೊಂದು ಮಹತ್ವದ ತಿರುವು. ಮೂರು ಮದುವೆಗಳು.. ಮೂರು ವಿಭಿನ್ನ ಅನುಭವಗಳು.. ಪವನ್ ಕಲ್ಯಾಣ್ ಅವರ ದಾಂಪತ್ಯ ಬದುಕಿನ ಈ ಪಯಣ ಇದೀಗ ಮತ್ತೆ ಸಾರ್ವಜನಿಕ ಚರ್ಚೆಯ ಕೇಂದ್ರವಾಗಿದೆ. ಆದರೆ ಸಂಬಂಧಗಳು ಮುರಿಯಲು ಕಾರಣವೇನು ಎಂಬುದನ್ನು ಅವರೇ ಬಹಿರಂಗಪಡಿಸಿಲ್ಲ. ಹೀಗಾಗಿ ಊಹಾಪೋಹಗಳಿಗಿಂತ ಅವರ ನಿರ್ಧಾರ ಮತ್ತು ಖಾಸಗಿತನಕ್ಕೆ ಗೌರವ ನೀಡುವುದು ಮುಖ್ಯ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments