Homeನ್ಯೂಸ್ದೇಶ-ವಿದೇಶಎಸ್ಕೇಪ್ ಆಗಲು ಸುರಂಗ ತೋಡಿದ ಹುಲಿ! ಅರಣ್ಯಾಧಿಕಾರಿಗಳಿಗೂ ಶಾಕ್..

ಎಸ್ಕೇಪ್ ಆಗಲು ಸುರಂಗ ತೋಡಿದ ಹುಲಿ! ಅರಣ್ಯಾಧಿಕಾರಿಗಳಿಗೂ ಶಾಕ್..

 

ಹುಲಿ ಅಂದ್ರೆ ಸುಮ್ನೆನಾ..? ಬೋನಿನಿಂದ ತಪ್ಪಿಸಿಕೊಳ್ಳೋಕೆ ಮಾಸ್ಟರ್ ಪ್ಲಾನ್ ಮಾಡಿದೆ! ಅರಣ್ಯಾಧಿಕಾರಿಗಳು ಎಷ್ಟೇ ಭದ್ರತೆ ಮಾಡಿದ್ರೂ ಹುಲಿ ಮಾತ್ರ ಸುಮ್ಮನಾಗಿಲ್ಲ. ತನ್ನದೇ ಬುದ್ಧಿ ಬಳಸಿ ಬೇಲಿಯ ಕೆಳಗೆ ಸುರಂಗ ಕೊರೆದು ಎಸ್ಕೇಪ್ ಆಗಿದೆ. ಅಚ್ಚರಿ ಅಂದ್ರೆ, ಇದೇ ಹುಲಿಯನ್ನು ಕೆಲವೇ ದಿನಗಳ ಹಿಂದೆ ಭಾರಿ ಕಾರ್ಯಾಚರಣೆ ನಡೆಸಿ ಮತ್ತೆ ಸೆರೆ ಹಿಡಿದು ಕರೆತರಲಾಗಿತ್ತು. ಆದ್ರೆ ಈಗ ಮತ್ತೊಮ್ಮೆ ಅಧಿಕಾರಿಗಳ ಕಣ್ತಪ್ಪಿಸಿ ಪರಾರಿಯಾಗಿದೆ. ಪಶ್ಚಿಮ ಬಂಗಾಳದ ಬಕ್ಸಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿರುವ ಈ ಘಟನೆ ಈಗ ಭಾರಿ ಕುತೂಹಲ ಮೂಡಿಸಿದೆ.

ಈ ಹುಲಿಯ ಹೆಸರು ದೋರ್ಸ್ ರಾಣಿ (Doars Rani). ಮೂರು ವರ್ಷದ ಈ ಹುಲಿಯನ್ನು ಬಿಹಾರದ ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶದಿಂದ ಪಶ್ಚಿಮ ಬಂಗಾಳದ ಬಕ್ಸಾ ಟೈಗರ್ ರಿಸರ್ವ್‌ಗೆ ಸ್ಥಳಾಂತರಿಸಲಾಗಿತ್ತು. ಬಕ್ಸಾ ಅರಣ್ಯದಲ್ಲಿ ಹುಲಿಗಳ ಸಂತತಿ ಹೆಚ್ಚಿಸುವ ಯೋಜನೆಯ ಭಾಗವಾಗಿ ಸೆಪ್ಟೆಂಬರ್ 30ರಂದು ಕರೆತರಲಾಗಿತ್ತು. ಅಕ್ಟೋಬರ್ 2ರಂದು ಅರಣ್ಯಕ್ಕೆ ಬಿಡಲಾಗಿತ್ತು. ಆದರೆ ಅಕ್ಟೋಬರ್ 4ರಂದೇ ತನ್ನ ಹೊಸ ಪ್ರದೇಶ ಬಿಟ್ಟು ಅಸ್ಸಾಂನತ್ತ ಪ್ರಯಾಣ ಬೆಳೆಸಿತ್ತು.

ಸುಮಾರು 10 ದಿನಗಳ ಕಾರ್ಯಾಚರಣೆ ಬಳಿಕ ನವೆಂಬರ್ 3ರಂದು ಅಸ್ಸಾಂನ ಕೊಕ್ರಝಾರ್ ಜಿಲ್ಲೆಯ ಗಿಲಾಗುರಿ ಪ್ರದೇಶದಲ್ಲಿ ಅರಣ್ಯಾಧಿಕಾರಿಗಳು ಈ ಹುಲಿಯನ್ನು ಟ್ರಾಂಕ್ವಿಲೈಸ್ ಮಾಡಿ ಮತ್ತೆ ಸೆರೆ ಹಿಡಿದಿದ್ದರು. ಬಳಿಕ ಬಕ್ಸಾ ಹುಲಿ ಸಂರಕ್ಷಿತ ಪ್ರದೇಶದ 2.2 ಹೆಕ್ಟೇರ್ ವಿಸ್ತೀರ್ಣದ ಅಕ್ಲಿಮಟೈಸೇಷನ್ ಎನ್‌ಕ್ಲೋಸರ್‌ನಲ್ಲಿ ಇರಿಸಲಾಗಿತ್ತು.

ಆದರೆ ನವೆಂಬರ್ 8ರಂದು ಮತ್ತೊಂದು ಅಚ್ಚರಿಯ ಘಟನೆ ನಡೆದಿದೆ. ಮಧ್ಯಾಹ್ನ ಸುಮಾರು 1.30ರಿಂದ 2 ಗಂಟೆಯ ವೇಳೆಗೆ ಹುಲಿ ಆವರಣದಿಂದ ಕಾಣೆಯಾಗಿದೆ. ಪರಿಶೀಲಿಸಿದಾಗ ಬೇಲಿಯ ಕೆಳಭಾಗದಲ್ಲಿ ಸುರಂಗ ಕೊರೆದು ಹೊರಬಂದಿರುವುದು ಗೊತ್ತಾಗಿದೆ!

ಅಚ್ಚರಿ ಅಂದ್ರೆ, ಆವರಣದ ಬೇಲಿಯ ಅಡಿಪಾಯ ಎರಡು ಅಡಿ ದಪ್ಪ ಹಾಗೂ ನಾಲ್ಕು ಅಡಿ ಆಳದ ಕಾಂಕ್ರೀಟ್ ನಿರ್ಮಾಣ ಹೊಂದಿತ್ತು ಎನ್ನಲಾಗಿದೆ. ಆದರೂ ಅದರ ಕೆಳಗಿನ ಮಣ್ಣನ್ನು ಅಗೆದು ಸುರಂಗ ನಿರ್ಮಿಸಿ ಹುಲಿ ಪರಾರಿಯಾಗಿದೆ. ಸದ್ಯ ಹುಲಿಯ ದೇಹಕ್ಕೆ ಅಳವಡಿಸಿರುವ ರೇಡಿಯೋ ಕಾಲರ್ ಕಾರ್ಯನಿರ್ವಹಿಸುತ್ತಿದ್ದು, ಅದರ ಚಲನವಲನವನ್ನು ಅಧಿಕಾರಿಗಳು ಪತ್ತೆಹಚ್ಚುತ್ತಿದ್ದಾರೆ. ಈಗಾಗಲೇ ಬಲಾ ನದಿಯನ್ನು ದಾಟಿ ಮತ್ತೆ ಅಸ್ಸಾಂ ಕಡೆಗೆ ಸಾಗಿರುವುದಾಗಿ ವರದಿಯಾಗಿದೆ.

ಇದೀಗ ಹುಲಿಯ ಪತ್ತೆಗಾಗಿ ಅರಣ್ಯ ಇಲಾಖೆ ಭಾರಿ ಕಾರ್ಯಾಚರಣೆ ಆರಂಭಿಸಿದೆ. ಸುಮಾರು 60 ಅರಣ್ಯ ಸಿಬ್ಬಂದಿ, ಮೂರು ಆನೆಗಳು ಹಾಗೂ ಹಿರಿಯ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜನವಸತಿ ಪ್ರದೇಶಗಳತ್ತ ಹುಲಿ ತೆರಳದಂತೆ ನಿಗಾ ವಹಿಸಲಾಗಿದೆ.

ಒಟ್ಟಿನಲ್ಲಿ ಸೆರೆ ಹಿಡಿದರೂ ಮತ್ತೆ ಮತ್ತೆ ಎಸ್ಕೇಪ್ ಆಗುತ್ತಿರುವ ಈ ಹುಲಿ ಅರಣ್ಯಾಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹುಲಿಯನ್ನು ಮತ್ತೆ ಸೆರೆ ಹಿಡಿಯುತ್ತಾರಾ? ಅಥವಾ ತನ್ನ ಇಷ್ಟದ ಕಾಡಿನತ್ತ ಪ್ರಯಾಣ ಮುಂದುವರಿಸುತ್ತಾ? ಕಾದು ನೋಡಬೇಕಿದೆ!

ಸೆರೆಯಲ್ಲಿರಲು ಒಪ್ಪದ ಹುಲಿ.. ಸುರಂಗ ಕೊರೆದು ಎರಡನೇ ಬಾರಿ ಎಸ್ಕೇಪ್!

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments