Homeನ್ಯೂಸ್ಬೆಂಗಳೂರಿನಲ್ಲಿ ಆಳ್ವಾಸ್ ಸಮ್ಮಿಲನ ಕಾರ್ಯಕ್ರಮ

ಬೆಂಗಳೂರಿನಲ್ಲಿ ಆಳ್ವಾಸ್ ಸಮ್ಮಿಲನ ಕಾರ್ಯಕ್ರಮ

ಪತ್ರಿಕೋದ್ಯಮದಲ್ಲಿನ ಸವಾಲುಗಳು, ಉದ್ಯೋಗ ಅವಕಾಶಗಳು, ಭವಿಷ್ಯದ ಬಗ್ಗೆ ಚರ್ಚೆ

ಬೆಂಗಳೂರು : ರಾಜಾಜಿನಗರ ಕದಂಬ ಹೊಟೇಲ್ ನಲ್ಲಿ ಆಳ್ವಾಸ್ ಸಮ್ಮಿಲನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲೆ, ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಈ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿತ್ತು. ಆಳ್ವಾಸ್ ನಲ್ಲಿ ಕೋರ್ಸ್ ಮುಗಿಸಿ ಬಂದ ಹಲವ್ರು ರಾಜ್ಯದ ಪ್ರತಿಷ್ಟಿತ ಚಾನೆಲ್, ಪತ್ರಿಕೆಗಳಲ್ಲಿ ಆ್ಯಂಕರ್, ರಿಪೋರ್ಟರ್ ಸೇರಿದಂತೆ ಹಲವು ವಿಭಾಗಗಳಲ್ಲಿ ಕೆಲಸ ಮಾಡ್ತಿದ್ದಾರೆ. ಕೆಲವರು ರಾಜಕೀಯ ಮುಖಂಡರಿಗೆ ಮಾಧ್ಯಮ ಸಲಹೆಗಾರರಾಗಿದ್ದು, ಇನ್ನೂ ಕೆಲವ್ರು ಕಾಲೇಜುಗಳಲ್ಲಿ ಉಪನ್ಯಾಸಕರಾಗಿದ್ದಾರೆ. ಕಾರ್ಪೋರೆಟ್ ಕಂಪನಿಗಳಲ್ಲೂ ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಹಳೆಯ ವಿದ್ಯಾರ್ಥಿಗಳು ಮಿಂಚುತ್ತಿದ್ದು, ಬೆಂಗಳೂರಿನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದಾರೆ.

ಕನ್ನಡ ಪತ್ರಿಕೋದ್ಯಮದಲ್ಲಿ ಆಳ್ವಾಸ್ ಕಾಲೇಜಿನ ( ಪಿಜಿ ಪತ್ರಿಕೋದ್ಯಮ) ಪಾತ್ರ ದ ಕುರಿತು ನಡೆದ ಈ ಆಳ್ವಾಸ್ ಸಮ್ಮಿಲನ ಕಾರ್ಯಕ್ರಮದಲ್ಲಿ, ಹಳೆಯ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ದಿನಗಳನ್ನ ಮೆಲಕು ಹಾಕುತ್ತಾ, ಸದ್ಯ ತಮ್ಮ ವೃತ್ತಿ ಬದುಕಿನ ಅನುಭವಗಳನ್ನ ಹಂಚಿಕೊಂಡರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ TV5 ಕನ್ನಡ ಚಾನೆಲ್ ನ ಪ್ರಧಾನ ಸಂಪಾಕರಾದ ರಾಮಕಾಂತ್ ಎ ಎಸ್ ಆಗಮಿಸಿದ್ದರು. ಕಾರ್ಯಕ್ರಮ ಕುರಿತು ಮಾತನಾಡಿದ ಅವ್ರು, ಕನ್ನಡ ಪತ್ರಿಕೋದ್ಯಮದ ಸ್ಥಿತಿಗತಿ ಹಾಗೂ ಉದ್ಯೋಗ ಅವಕಾಶಗಳ ಬಗ್ಗೆ ಹೇಳಿದ್ರು. ಪ್ರಸ್ತುತ ಅತಿ ವೇಗದಲ್ಲಿ ಮುನ್ನುಗ್ಗುತ್ತಿರುವ ಡಿಜಿಟಲ್ ಮಾಧ್ಯಮಗಳಿಗೆ ಮೂಗುದಾರ ಇಲ್ಲ. ಸತ್ಯವನ್ನ ಹೇಳಿದ್ರೆ ಜನ ನಮ್ಮನ್ನ ನಂಬುತ್ತಾರೆ. ಪತ್ರಕರ್ತನಾದವನು ನೇರವಾಗಿ ಪ್ರಶ್ನಿಸಿ, ಸತ್ಯವನ್ನೇ ಹೇಳಬೇಕಾಗುತ್ತದೆ. ಇನ್ನೂ ಡಿಜಿಟಲ್ ಮಾಧ್ಯಮಗಳಲ್ಲಿ ಸತ್ಯ ಯಾವ್ದು, ಸುಳ್ಳು ಯಾವ್ದು ಅಂತ ಗೊತ್ತಾಗುತ್ತಿಲ್ಲ. ಪ್ರಸ್ತುತ ಸ್ಥಿತಿಗತಿಯಲ್ಲಿ ಸಾಮಾಜಿಕ ಜಾಲತಾಣಗಳನ್ನ ಸತ್ಯದ ಧ್ವನಿಯಾಗಿ ಬಳಕೆಯಾಗಬೇಕಿದೆ ಎಂದ್ರು.

ಇನ್ನೂ ಆಳ್ವಾಸ್ ನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳ ಬಗ್ಗೆಯೂ ಮಾತನಾಡಿದ್ರು. ಪ್ರತಿಯೊಂದು ಮಾಧ್ಯಮ ಸಂಸ್ಥೆಗಳಲ್ಲೂ ಆಳ್ವಾಸ್ ನ ವಿದ್ಯಾರ್ಥಿಗಳು ಇದ್ದಾರೆ. ಸಮಾಜಕ್ಕೆ ಪತ್ರಕರ್ತರನ್ನ ತಯಾರು ಮಾಡುವ ಆಳ್ವಾಸ್ ಪತ್ರಿಕೋದ್ಯಮ ವಿಭಾಗವನ್ನ ಶ್ಲಾಘಿಸಿದ್ರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ , ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಡಾ. ಮೋಹನ್ ಆಳ್ವಾ, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಯುವ ಪತ್ರಕರ್ತರ ಸಾಧನೆ ಹಾಗೂ ಬೆಳವಣಿಗೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು.‌ ಪತ್ರಕರ್ತರು ಸತ್ಯವನ್ನೇ ಹೇಳಬೇಕು. ಸತ್ಯದ ಹಾದಿಯಲ್ಲಿ ಪತ್ರಿಕೋದ್ಯಮ ಸಾಗಬೇಕು. ಜನರ ನಂಬಿಕೆಗಳನ್ನ ಉಳಿಸಿಕೊಂಡು ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದ್ರು.

ಆಳ್ವಾಸ್ ಶಿಕ್ಷಣ ಸಂಸ್ಥೆಯ ಬಗ್ಗೆಯೂ ಮಾತನಾಡಿದ ಡಾ. ಮೋಹನ್ ಆಳ್ವಾ, ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಕ್ರಾಂತಿಯ ಬಗ್ಗೆ ವಿವರಿಸಿದರು. ಸಾಂಸ್ಕೃತಿಕ, ಶೈಕ್ಷಣಿಕ, ಕ್ರೀಡೆ ಹೀಗೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಗೈದು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆ ಹೊಸ ಕ್ರಾಂತಿ ಶುರು ಮಾಡಿದ್ದು, ಈ ಬ್ರ್ಯಾಂಡ್ ನ್ನು ಆಳ್ವಾಸ್ ನಿಂದ ಹೊರ ಬರುವ ಪ್ರತಿಯೊಬ್ಬ ಹಳೆಯ ವಿದ್ಯಾರ್ಥಿ ಉಳಿಸಿಕೊಂಡು ಬರಬೇಕಿದೆ ಎಂದರು.

ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ

ಆಳ್ವಾಸ್ ಕಾಲೇಜು ಸಮ್ಮಿಲನ ಕಾರ್ಯಕ್ರಮದಲ್ಲಿ, ಆಳ್ವಾಸ್ ಕಾಲೇಜಿನ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮದ ಪ್ರಸ್ತುತ ವಿದ್ಯಾರ್ಥಿಗಳು , ಬೆಂಗಳೂರಿನ ರಾಜಾಜಿನಗರದ ಬಸವೇಶ್ವರ ವಾಣಿಜ್ಯ ಕಲಾಮತ ವಿಜ್ಞಾನ ಮಹಾವಿದ್ಯಾಲಯ ಹಾಗೂ GFGC ರಾಜಾಜಿನಗರ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು. ಪತ್ರಿಕೋದ್ಯಮದಲ್ಲಿನ ಸವಾಲುಗಳು, ಉದ್ಯೋಗ ಅವಕಾಶಗಳು ಹಾಗೂ ಪತ್ರಿಕೋದ್ಯಮದ ಬಗ್ಗೆ ಜನರ ಆಸಕ್ತಿಯ ಬಗ್ಗೆ ವಿದ್ಯಾರ್ಥಿಗಳು, ಯುವ ಪತ್ರಕರ್ತರ ಜೊತೆ ಸಂವಾದ ನಡೆಸಿ, ಹಲವಾರು ಮಾಹಿತಿಯನ್ನ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಹಾಗೂ ಉಪನ್ಯಾಸಕರ ತಂಡ ಉಪಸ್ಥಿತಿಯಿತ್ತು.

ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘದ ವಿದ್ಯಾರ್ಥಿ, ಪಬ್ಲಿಕ್ ಟಿವಿ ಚಾನೆಲ್ ನ ವರದಿಗಾರ ಪ್ರಕಾಶ್ ಡಿ.ರಾಂಪೂರ್ ಪ್ರಸ್ತಾವಿಕ ಭಾಷಣ ಮಾಡಿದ್ರೆ, ಹಳೆಯ ವಿದ್ಯಾರ್ಥಿ ಹಾಗೂ ವಿಶ್ವವಾಣಿ ಟಿವಿಯ ಚಿದಾನಂದ್ ನಿರೂಪಣೆ ಮಾಡಿದ್ರು. ದುರ್ಗಾ ಪ್ರಸನ್ನ ಸ್ವಾಗತ ಭಾಷಣ ಮಾಡಿದ್ರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments