Homeನ್ಯೂಸ್ದೇಶ-ವಿದೇಶಶಾಕಿಂಗ್.. ಈ ಬಾರಿ ಚಳಿಗಾಲ ಇರಲ್ಲ..

ಶಾಕಿಂಗ್.. ಈ ಬಾರಿ ಚಳಿಗಾಲ ಇರಲ್ಲ..

ಹವಾಮಾನ ಇಲಾಖೆ ಮತ್ತು ಜಾಗತಿಕ ವಿಜ್ಞಾನಿಗಳು “ಸೂಪರ್-ಡೂಪರ್ ಎಲ್ ನಿನೋ” ವಿದ್ಯಮಾನದ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿದ್ದು, ಇಡೀ ಭೂಮಂಡಲವು ತಾಪಮಾನ ಏರಿಕೆಯಿಂದಾಗಿ ಕೆಂಪು ಬಣ್ಣಕ್ಕೆ ತಿರುಗುತ್ತಿದೆ ಎಂದು ಗಂಭೀರ ಎಚ್ಚರಿಕೆ ನೀಡಿದ್ದಾರೆ.

ಮಧ್ಯ ಮತ್ತು ಪೂರ್ವ ಉಷ್ಣವಲಯದ ಪೆಸಿಫಿಕ್ ಮಹಾಸಾಗರದಲ್ಲಿ ಮೇಲ್ಮೈ ತಾಪಮಾನವು ಅಭೂತಪೂರ್ವ ಮಟ್ಟಕ್ಕೆ ಏರಿಕೆಯಾಗುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ವಿಶ್ವ ಹವಾಮಾನ ಸಂಸ್ಥೆ ಮತ್ತು ಹವಾಮಾನ ತಜ್ಞರು ನೀಡಿರುವ ವರದಿಗಳ ಪ್ರಕಾರ, ಈ ವಿದ್ಯಮಾನದಿಂದ ಜಗತ್ತಿನಾದ್ಯಂತ ಪ್ರಮುಖ ಬದಲಾವಣೆಗಳು ಸಂಭವಿಸಲಿವೆ.. ಈ ಬಾರಿ ಚಳಿಗಾಲ ಇರಲ್ಲ.. ಉಷ್ಣ ಗಾಳಿ ಲಕ್ಷಾಂತರ ಮಂದಿಯನ್ನು ಬಲಿ ಪಡೆಯಲಿದೆ.

ಜಗತ್ತು ಕೆಂಪಾಗುತ್ತಿದೆ.. ತಾಪ ಏರುತಿದೆ..

ಹವಾಮಾನ ತಜ್ಞ ಲಿಯೋನ್ ಸೈಮನ್ಸ್ ಅವರು ಇಡೀ ಗ್ರಹದ ಹವಾಮಾನ ನಕ್ಷೆಯನ್ನು ಹಂಚಿಕೊಂಡಿದ್ದು, ಅಮೆರಿಕ ಹೊರತುಪಡಿಸಿ ವಿಶ್ವದ ಬಹುತೇಕ ಎಲ್ಲಾ ಭಾಗಗಳೂ ತಾಪಮಾನದ ತೀವ್ರತೆಯಿಂದಾಗಿ ಕೆಂಪು ಬಣ್ಣಕ್ಕೆ ತಿರುಗಿರುವುದನ್ನು ತೋರಿಸಿದ್ದಾರೆ.

ಮತ್ತೋರ್ವ ಪ್ರಸಿದ್ಧ ಹವಾಮಾನ ವಿಜ್ಞಾನಿ ಜೀಕ್ ಹೌಸ್‌ಫಾದರ್ ಪ್ರಕಾರ, ಪೆಸಿಫಿಕ್ ಸಾಗರದ ‘ನಿನೋ 3.4’ ಪ್ರದೇಶದ ತಾಪಮಾನವು ಸಾಮಾನ್ಯಕ್ಕಿಂತ 3.4 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದೆ. ಇದು ಇತಿಹಾಸದಲ್ಲೇ ದಾಖಲಾದ ಅತ್ಯಂತ ಭೀಕರ ಎಲ್ ನಿನೋ ವಿದ್ಯಮಾನವಾಗಿದೆ. 2026ರ ಅಕ್ಟೋಬರ್‌ನಿಂದ ಡಿಸೆಂಬರ್‌ ಅವಧಿಯಲ್ಲಿ ಈ ತಾಪಮಾನದ ವ್ಯತ್ಯಾಸವು ದಾಖಲೆಯ 3.7 ಡಿಗ್ರಿ ಸೆಲ್ಸಿಯಸ್ ತಲುಪುವ ಭೀತಿ ಇದೆ.

ಚಳಿಗಾಲದ ಮೇಲೆ ಪ್ರಭಾವ

ಈ ಸೂಪರ್-ಡೂಪರ್ ಎಲ್ ನಿನೋ ಪ್ರಭಾವವೂ 2026ರ ಚಳಿಗಾಲದ ಅವಧಿಯಲ್ಲೂ ತನ್ನ ಗರಿಷ್ಠ ಶಕ್ತಿಯನ್ನು ಕಾಯ್ದುಕೊಳ್ಳಲಿದೆ. ಇದರಿಂದಾಗಿ ಈ ಬಾರಿ ಜಾಗತಿಕವಾಗಿ ವಾಡಿಕೆಯ ಚಳಿಗಾಲವೇ ಇರುವುದಿಲ್ಲ ಮತ್ತು ಉಷ್ಣಾಂಶವು ಸಾಮಾನ್ಯಕ್ಕಿಂತ ಅಧಿಕವಾಗಿರಲಿದೆ.

ಜಾಗತಿಕ ಸಾವು-ನೋವುಗಳ ಭೀತಿ

ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್ ನೀಡಿರುವ ವರದಿಯ ಪ್ರಕಾರ, ಈ ಅಸಾಮಾನ್ಯ ಉಷ್ಣ ಪರಿಸ್ಥಿತಿಯಿಂದಾಗಿ ಜಗತ್ತಿನಲ್ಲಿ ಸಾಮಾನ್ಯಕ್ಕಿಂತ ಶೇಕಡಾ 44 ರಷ್ಟು ಹೆಚ್ಚು ‘ಅತಿ ಉಷ್ಣ ದಿನಗಳು’ ಎದುರಾಗಲಿವೆ.

ಸೆಪ್ಟೆಂಬರ್ 2026 ರಿಂದ ಫೆಬ್ರವರಿ 2027 ರವರೆಗಿನ ಅವಧಿಯಲ್ಲಿ ಜಾಗತಿಕವಾಗಿ ಉಂಟಾಗುವ ತೀವ್ರ ಶಾಖದ ಅಲೆಗೆ ಸುಮಾರು 4.5 ಲಕ್ಷಕ್ಕೂ ಅಧಿಕ ಜನ ಸಾವಿಗೀಡಾಗಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಭಾರತ ಮತ್ತು ಕರ್ನಾಟಕದ ಮೇಲೇನು ಪರಿಣಾಮ?

ಎಲ್ ನಿನೋ ಪ್ರಬಲವಾದಾಗಲೆಲ್ಲಾ ಭಾರತದಲ್ಲಿ ಮುಂಗಾರು ಮಳೆಯ ಮಾದರಿ ಸಂಪೂರ್ಣ ಏರುಪೇರಾಗುತ್ತದೆ. ಈ ಬಾರಿ ಸೂಪರ್ ಎಲ್ ನಿನೋ ಪರಿಣಾಮದಿಂದಾಗಿ ಭಾರತದಲ್ಲಿ ಮುಂಗಾರು ದುರ್ಬಲಗೊಳ್ಳಲಿದ್ದು, ಭೀಕರ ಬರಗಾಲ ತಲೆದೋರುವ ಸಾಧ್ಯತೆ ಇದೆ.

ಕರ್ನಾಟಕದಲ್ಲಿ ಈಗಾಗಲೇ ಮುಂಗಾರು ಮಳೆಯಲ್ಲಿ ಶೇ. 30 ಕ್ಕಿಂತ ಹೆಚ್ಚು ಕೊರತೆ ಕಾಣಿಸಿಕೊಂಡಿದ್ದು, ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಇದು ಕೃಷಿ ವಲಯ ಮತ್ತು ಕುಡಿಯುವ ನೀರಿನ ಪೂರೈಕೆಗೆ ದೊಡ್ಡ ಸವಾಲಾಗಲಿದೆ.

ಇದು ಮಾನವ ನಿರ್ಮಿತ ಜಾಗತಿಕ ತಾಪಮಾನ ಏರಿಕೆ ಮತ್ತು ಎಲ್ ನಿನೋ ವಿದ್ಯಮಾನ ಎರಡೂ ಒಂದಕ್ಕೊಂದು ಮೇಳೈಸಿ ಸೃಷ್ಟಿಸುತ್ತಿರುವ ಜಾಗತಿಕ ಹವಾಮಾನ ತುರ್ತು ಪರಿಸ್ಥಿತಿಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments