Homeನ್ಯೂಸ್BIG EXPOSEಬೆಂಗಳೂರಿನಲ್ಲಿ ನಕಲಿ ಬ್ರಾಂಡೆಡ್ ಬಟ್ಟೆಗಳ ದಂಧೆ : ವರದಿಗಾರರ ಮೇಲೆ ಹಲ್ಲೆ

ಬೆಂಗಳೂರಿನಲ್ಲಿ ನಕಲಿ ಬ್ರಾಂಡೆಡ್ ಬಟ್ಟೆಗಳ ದಂಧೆ : ವರದಿಗಾರರ ಮೇಲೆ ಹಲ್ಲೆ

ಬೆಂಗಳೂರು: ಬ್ರಾಂಡೆಡ್ ಬಟ್ಟೆಗಳ ಹೆಸರಿನಲ್ಲಿ ಗ್ರಾಹಕರಿಗೆ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ವಾಸದ ಮನೆಗಳನ್ನೇ ಬಳಸಿಕೊಂಡು ನಕಲಿ ಬ್ರಾಂಡ್ ಬಟ್ಟೆಗಳನ್ನು ತಯಾರಿಸಿ, ಪ್ಯಾಕಿಂಗ್ ಮಾಡಿ ಸಂಗ್ರಹಿಸಲಾಗುತ್ತಿದೆ

ಬ್ರಾಂಡೆಡ್ ಬಟ್ಟೆಗಳೆಂದು ಭಾವಿಸಿ ಗ್ರಾಹಕರು ಸಾವಿರಾರು ರೂಪಾಯಿ ನೀಡಿ ಖರೀದಿಸುವ ಉಡುಪುಗಳು ವಾಸ್ತವದಲ್ಲಿ ಸ್ಥಳೀಯವಾಗಿ ತಯಾರಿಸಿದ ನಕಲಿ ಉತ್ಪನ್ನಗಳಾಗಿರಬಹುದು ಎಂಬುದು ಈ ವರದಿಯ ಅಂಶ

ವಾಸದ ಮನೆಗಳಲ್ಲೇ ನಕಲಿ ಬಟ್ಟೆಗಳ ತಯಾರಿಕೆ?

ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಬಾಡಿಗೆ ಮನೆಗಳನ್ನು ನಕಲಿ ಬ್ರಾಂಡ್ ಬಟ್ಟೆಗಳ ತಯಾರಿಕೆ, ಪ್ಯಾಕಿಂಗ್ ಮತ್ತು ಸಂಗ್ರಹಕ್ಕಾಗಿ ಬಳಸಲಾಗುತ್ತಿದೆ. ಈ ದಂಧೆಯಲ್ಲಿ ಅಕ್ಷಯ್ ಎಂಬ ವ್ಯಕ್ತಿ ಮತ್ತು ಆತನ ತಂಡ ಭಾಗಿಯಾಗಿದ್ದಾರೆ. ಮನೆಗಳಲ್ಲೇ ಹಲವಾರು ಕಾರ್ಮಿಕರನ್ನು ಬಳಸಿಕೊಂಡು ಬಟ್ಟೆಗಳಿಗೆ ಬ್ರಾಂಡ್ ಲೇಬಲ್‌ಗಳನ್ನು ಅಳವಡಿಸಿ, ಪ್ಯಾಕಿಂಗ್ ಮಾಡುವ ಕಾರ್ಯ ನಡೆಯುತ್ತಿದೆ.

ಕೆಲವು ಸ್ಥಳಗಳಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆಗಳಿಲ್ಲದೆ ಇಂತಹ ಚಟುವಟಿಕೆಗಳು ನಡೆಯುತ್ತಿವೆ ಮತ್ತು ಮನೆಗಳ ಮುಂದೆ ಈ ಚಟುವಟಿಕೆಗಳ ಬಗ್ಗೆ ಯಾವುದೇ ಸೂಚನಾ ಫಲಕಗಳಿಲ್ಲ.

ಮಾಳಗಾಳದಲ್ಲಿರುವ ಡಬಲ್ ಬೆಡ್‌ರೂಂ ಮನೆಯನ್ನು ಗೋದಾಮಿನಂತೆ ಬಳಸಲಾಗುತ್ತಿದೆ. ಇದರ ಜೊತೆಗೆ, ಬೆಂಗಳೂರಿನ ಇತರ ಕೆಲವು ಕಡೆಗಳಲ್ಲಿಯೂ ನಕಲಿ ಬ್ರಾಂಡ್ ಬಟ್ಟೆಗಳನ್ನು ಸಂಗ್ರಹಿಸಿಡಲಾಗುತ್ತಿದೆ.

ವರದಿಗಾರರ ಮೇಲೆ ಹಲ್ಲೆ ಯತ್ನದ ಆರೋಪ

ನಕಲಿ ಬ್ರಾಂಡ್ ಬಟ್ಟೆಗಳ ದಂಧೆಯ ಬಗ್ಗೆ ವರದಿ ಮಾಡಲು ತೆರಳಿದ್ದ ವೇಳೆ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಲು ಯತ್ನಿಸಲಾಗಿದೆ. ಸ್ಥಳದಲ್ಲಿದ್ದ ಕೆಲವರು ಕ್ಯಾಮೆರಾ ಮತ್ತು ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡು, ಚಿತ್ರೀಕರಿಸಿದ್ದ ವಿಡಿಯೋಗಳನ್ನು ಅಳಿಸಿದ್ದಾರೆ. ಅಲ್ಲದೆ, ಹತ್ತಕ್ಕೂ ಹೆಚ್ಚು ಜನರ ಗುಂಪು ಮಾಧ್ಯಮ ಪ್ರತಿನಿಧಿಗಳ ಮೇಲೆ ಮುಗಿಬಿದ್ದು, ಅವರನ್ನು ಎಳೆದಾಡಿ ಹಲ್ಲೆ ನಡೆಸಲು ಯತ್ನಿಸಿದೆ.

ಈ ಅಕ್ರಮದ ಕುರಿತು ಸುದ್ದಿ ಪ್ರಸಾರ ಮಾಡದಂತೆ ಆರಂಭದಲ್ಲಿ ಬೆದರಿಕೆ ಹಾಕಲಾಗಿತ್ತು. ನಂತರ ಹಣ ನೀಡುವುದಾಗಿ ಹೇಳಿ ಸುದ್ದಿ ಪ್ರಸಾರ ಮಾಡದಂತೆ ಆಮಿಷ ಒಡ್ಡಲಾಗಿತ್ತು. ಆದರೆ ನೇಷನ್‌ ನ್ಯೂಸ್‌ ಕನ್ನಡ ಇಂತಹ ಆಮಿಷಗಳಿಗೆ ಒಳಗಾಗದೆ ಸುದ್ದಿ ಪ್ರಸಾರ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments