Homeನ್ಯೂಸ್BIG EXPOSEಧಮ್ಕಿ ಹಾಕಿದ ಕಾಂಗ್ರೆಸ್ ಮುಖಂಡ ಮಣಿ ವಿರುದ್ಧ ದೂರು ದಾಖಲು..!

ಧಮ್ಕಿ ಹಾಕಿದ ಕಾಂಗ್ರೆಸ್ ಮುಖಂಡ ಮಣಿ ವಿರುದ್ಧ ದೂರು ದಾಖಲು..!

ಧಮ್ಕಿ ಹಾಕಿದ ಕಾಂಗ್ರೆಸ್ ಮುಖಂಡ ಮಣಿ ವಿರುದ್ಧ ದೂರು ದಾಖಲು..!

ಬೆಂಗಳೂರು:  ಮೇಕ್‌ಓವರ್ ಅಕಾಡೆಮಿಯನ್ನೇ ಹಾಳು ಮಾಡುವುದಾಗಿ ಬೆದರಿಕೆ! ಮಹಿಳೆಯರ ಹೆಸರಿನಲ್ಲಿ ಸುಳ್ಳು ಅಪಪ್ರಚಾರದ ಎಚ್ಚರಿಕೆ! SC/ST ಕಾಯ್ದೆಯಡಿ ಸುಳ್ಳು ಕೇಸ್ ದಾಖಲಿಸುವುದಾಗಿ ಧಮ್ಕಿ! ಕಾಂಗ್ರೆಸ್ ಮುಖಂಡ ಮಣಿ ವಿರುದ್ಧ ಇಂತಹ ಗಂಭೀರ ಆರೋಪ ಕೇಳಿಬಂದಿದೆ.

ತಮ್ಮ ಅಕಾಡೆಮಿಯ ಹೆಸರಿಗೆ ಮಸಿ ಬಳಿಯುವ ಹಾಗೂ ವೃತ್ತಿಪರ ಬದುಕಿಗೆ ಧಕ್ಕೆ ತರುವ ರೀತಿಯಲ್ಲಿ ಮಣಿ ಬೆದರಿಕೆ ಹಾಕಿದ್ದಾರೆ ಎಂದು ವ್ಯಕ್ತಿಯೊಬ್ಬರು ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಹಿಳೆಯರ ಜೊತೆ ಅನೈತಿಕ ಸಂಬಂಧವಿದೆ ಎಂದು ಅಪಪ್ರಚಾರದ ಬೆದರಿಕೆ?

 ಅಕಾಡೆಮಿಯಲ್ಲಿ ಕೆಲಸ ಮಾಡುವ ಮಹಿಳೆಯರೊಂದಿಗೆ ಮಾಲೀಕನಿಗೆ ಅನೈತಿಕ ಸಂಬಂಧವಿದೆ ಎಂದು ಸುಳ್ಳು ಪ್ರಚಾರ ಮಾಡುವುದಾಗಿ ಮಣಿ ಬೆದರಿಕೆ ಹಾಕಿದ್ದಾರೆ ಎಂಬುದು ದೂರಿನಲ್ಲಿರುವ ಪ್ರಮುಖ ಆರೋಪ. ಈ ಮೂಲಕ ತಮ್ಮ ವೈಯಕ್ತಿಕ ಗೌರವಕ್ಕೆ ಧಕ್ಕೆ ತರುವುದರ ಜೊತೆಗೆ, ಅಕಾಡೆಮಿಯ ಹೆಸರನ್ನೂ ಕೆಡಿಸುವ ಪ್ರಯತ್ನ ನಡೆದಿದೆ ಎಂದು ಅಕಾಡೆಮಿ ಮಾಲೀಕರು ಆರೋಪಿಸಿದ್ದಾರೆ.

ದೂರುದಾರರು ನಡೆಸುತ್ತಿರುವ ಅಕಾಡೆಮಿಗೆ ಹಾನಿ ಮಾಡುವುದಾಗಿ ಮಣಿ ನೇರವಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಅಕಾಡೆಮಿಯಲ್ಲಿ ಕೆಲಸ ಮಾಡುವ ಮಹಿಳೆಯರೊಂದಿಗೆ ಮಾಲೀಕರಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬ ಸುಳ್ಳು ಆರೋಪಗಳನ್ನು ಹರಡಿ ಅವರ ವೈಯಕ್ತಿಕ ಹಾಗೂ ಸಾಮಾಜಿಕ ಗೌರವಕ್ಕೆ ಧಕ್ಕೆ ತರುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

SC/ST ಕಾಯ್ದೆಯಡಿ ಸುಳ್ಳು ಕೇಸ್ ಹಾಕುವ ಬೆದರಿಕೆ?

ಇದರ ಜೊತೆಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ (SC/ST Act) ಅಡಿಯಲ್ಲಿ ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವುದಾಗಿ ಮಣಿ ಬೆದರಿಕೆ ಹಾಕಿದ್ದಾರೆ ಎಂದೂ  ದೂರಿನಲ್ಲಿ ತಿಳಿಸಿದ್ದಾರೆ. ಕಾನೂನು ಕ್ರಮದ ಭಯ ತೋರಿಸಿ ತಮ್ಮನ್ನು ಒತ್ತಡಕ್ಕೆ ಸಿಲುಕಿಸುವ ಪ್ರಯತ್ನ ನಡೆದಿದೆ ಎಂಬುದು ಅವರ ಆರೋಪ.

ಮಾನಸಿಕ ಕಿರುಕುಳಕ್ಕೆ ಪೊಲೀಸರ ಮೊರೆ

ಬೆದರಿಕೆಗಳಿಂದ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದು, ತಮ್ಮ ಅಕಾಡೆಮಿಯ ಗೌರವ ಮತ್ತು ವೃತ್ತಿಗೆ ಹಾನಿಯಾಗುವ ಆತಂಕ ಎದುರಾಗಿದೆ ಎಂದು ಅಕಾಡೆಮಿ ಮಾಲೀಕರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಣಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೀಣ್ಯ ಪೊಲೀಸರ ಮೊರೆ ಹೋಗಿದ್ದಾರೆ.

ಕಾಂಗ್ರೆಸ್ ಮುಖಂಡನೆಂದು ಕರೆಸಿಕೊಳ್ಳುವ ಈತನ ವಿರುದ್ಧ ಸಾಕಷ್ಟು ಗಂಭೀರ ಆರೋಪಗಳಿವೆ, ಮಹಿಳೆಯರಿಗೆ ಕಿರುಕುಳ, ಪ್ರಶ್ನಿಸುವವರ ವಿರುದ್ಧ ದೌರ್ಜನ್ಯ ಹಾಗೂ ಪ್ರಭಾವ ಬೀರಿ ಸುಳ್ಳು ಕೇಸ್ಗಳನ್ನು ಹಾಕಿಸಿ ಬೆದರಿಕೆ ಮೂಲಕ ಬಾಯಿಮುಚ್ಚಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ಇದೇ ರೀತಿ ಮೇಕ್‌ಓವರ್ ಅಕಾಡೆಮಿ ಮಾಲೀಕರಿಗೂ ಮಣಿ ಜೀವ ಬೆದರಿಕೆ, ಸುಳ್ಳು ಕೇಸ್ ಹಾಕೋ ಬೆದರಿಕೆ, ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿರುವುದರ ಬಗ್ಗೆ ಸಾಕಷ್ಟು ದಾಖಲೆಗಳನ್ನು ಕೂಡ ನೀಡಿದ್ದಾರೆ. ಇಷ್ಟಾದರೂ ಪ್ರಭಾವಿ ಎಂಬುವ ಕಾರಣಕ್ಕೆ, ಪೊಲೀಸರಾಗಲಿ, ಪಕ್ಷವಾಗಲಿ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments