Homeನ್ಯೂಸ್ಕ್ರೈಂಪಿಎಂ ಮೋದಿ ಹ* ತ್ಯೆಗೆ ಸಂಚು..! ಓರ್ವ ಶಂಕಿತ ಉ*ಗ್ರ ಅರೆಸ್ಟ್..!

ಪಿಎಂ ಮೋದಿ ಹ* ತ್ಯೆಗೆ ಸಂಚು..! ಓರ್ವ ಶಂಕಿತ ಉ*ಗ್ರ ಅರೆಸ್ಟ್..!

ಮುಂಬೈನಲ್ಲಿ, ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ATS) ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಶಂಕಿತ ಉಗ್ರನನ್ನ ಬಂಧಿಸಲಾಗಿದೆ. ನಿಷೇಧಿತ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ (JeM) ಜೊತೆ ನಂಟು ಹೊಂದಿರುವ ಶಂಕಿತ ಉಗ್ರನೊಬ್ಬನನ್ನು ಬಂಧಿಸಿದ್ದು, ಹಲವು ಮಾಹಿತಿಯನ್ನ ಕಲೆ ಹಾಕಿದ್ದಾರೆ.‌

ಬಂಧಿತ ಆರೋಪಿ, ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಬಹಿರಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕರೆ ನೀಡಿದ್ದಲ್ಲದೆ, ಯುವಕರು ಶಸ್ತ್ರಾಸ್ತ್ರ ಹಿಡಿದು ಜಿಹಾದ್ ನಡೆಸುವಂತೆ ನಿರಂತರವಾಗಿ ಪ್ರಚೋದಿಸುತ್ತಿದ್ದ ಎಂದು ತನಿಖೆಯಲ್ಲಿ ಬಯಲಾಗಿದೆ. ಬಂಧಿತ ಆರೋಪಿಯನ್ನು ಮೊಹಮ್ಮದ್ ಹಸನ್ ಅಬು ಸರ್ಮದ್ ಅಖ್ತರ್ (33) ಎಂದು ಗುರುತಿಸಲಾಗಿದ್ದು, ಮುಂಬೈನ ಮಾಹಿಮ್ ಮೆಟ್ರೋ ನಿಲ್ದಾಣದ ಬಳಿ ATS ಈತನನ್ನು ಹೆಡೆಮುರಿ ಕಟ್ಟಿದೆ.

ತನಿಖಾ ಸಂಸ್ಥೆಗಳು ಆರೋಪಿಯ ಇನ್‌ಸ್ಟಾಗ್ರಾಮ್ ಖಾತೆಯನ್ನು ಪರಿಶೀಲಿಸಿದಾಗ ಬೆಚ್ಚಿಬೀಳಿಸುವ ಅಂಶಗಳು ಹೊರಬಿದ್ದಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಮುಂಬೈ ಭೇಟಿಯ ಸಂದರ್ಭದಲ್ಲಿ, ಬಿಕೆಸಿ (BKC) ಕಾರ್ಯಕ್ರಮದ ಬಳಿ ಶಸ್ತ್ರಾಸ್ತ್ರ ಹೊಂದಿದ್ದ ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದ ವರದಿಯೊಂದರ ಅಡಿಯಲ್ಲಿ ಈತ ಕಮೆಂಟ್ ಮಾಡಿದ್ದ. “ಇಂದಿರಾ ಗಾಂಧಿಯವರಂತೆ ಮೋದಿಯವರ ವಿಷಯದಲ್ಲೂ ಏನಾದರೂ ಮಾಡಬೇಕಿತ್ತು” ಎಂದು ಬರೆದಿದ್ದ. 1984 ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆ ನಡೆದ ರೀತಿಯಲ್ಲೇ ಪ್ರಧಾನಿ ಮೋದಿ ಅವರ ಮೇಲೂ ಮಾರಣಾಂತಿಕ ದಾಳಿ ನಡೆಸುವಂತೆ ಈತ ಬಹಿರಂಗವಾಗಿ ಕರೆ ನೀಡಿದ್ದ ಎಂದು ಎಟಿಎಸ್ ದಾಖಲಿಸಿದೆ.

ಹಗಲಿನಲ್ಲಿ ರಾಪಿಡೋ ರೈಡರ್, ರಾತ್ರಿಯಲ್ಲಿ ಡಿಜಿಟಲ್ ಜಿಹಾದಿ..!

ಈ ಶಂಕಿತ ಉಗ್ರ ಸಾಮಾನ್ಯ ಜೀವನ ನಡೆಸುತ್ತಿದ್ದ. ಹಗಲಿನಲ್ಲಿ ಮುಂಬೈ ರಸ್ತೆಗಳಲ್ಲಿ ರಾಪಿಡೋ ಬೈಕ್ ರೈಡರ್ ಆಗಿ ಹಾಗೂ ಸುಗಂಧ ದ್ರವ್ಯ (ಪರ್ಫ್ಯೂಮ್) ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದ. ಆದರೆ ಟ್ವಿಟರ್, ಇನ್‌ಸ್ಟಾಗ್ರಾಮ್ ಹಾಗೂ ಟೆಲಿಗ್ರಾಮ್‌ಗಳಲ್ಲಿ ನಕಲಿ ಹಾಗೂ ಸ್ವಂತ ಖಾತೆಗಳನ್ನು ಬಳಸಿಕೊಂಡು ಯುವಕರ ತಲೆಕೆಡಿಸುವುದು, ಕೋಮು ದ್ವೇಷ ಬಿತ್ತುವುದು ಮತ್ತು ದೇಶವಿರೋಧಿ ಭಾವನೆಗಳನ್ನು ಹರಡುವುದೇ ಈತನ ಮುಖ್ಯ ಕೆಲಸವಾಗಿತ್ತು ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಜೈಶ್-ಎ-ಮೊಹಮ್ಮದ್ ಜಾಲ ಮತ್ತು ಪಾಕಿಸ್ತಾನ ಲಿಂಕ್..!

ಜೈಶ್-ಎ-ಮೊಹಮ್ಮದ್ ಜಾಲ ಮತ್ತು ಪಾಕಿಸ್ತಾನ ಲಿಂಕ್ ಹೊಂದಿದ್ದ. ಪಾಕಿಸ್ತಾನ ಬೆಂಬಲಿತ ‘ಐಬಿಎನ್-ಇ-ಖಾಸಿಮ್’ (Ibn-e-Qasim) ಎಂಬ ತೀವ್ರಗಾಮಿ ಟೆಲಿಗ್ರಾಮ್ ಚಾನೆಲ್‌ನಲ್ಲಿ ಸಕ್ರಿಯ ಸದಸ್ಯನಾಗಿದ್ದ. ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ, ಜಾಗತಿಕ ಉಗ್ರ ಮೌಲಾನಾ ಮಸೂದ್ ಅಜರ್‌ನ ಆಡಿಯೋ ಭಾಷಣಗಳನ್ನು ತನ್ನ ಟೆಲಿಗ್ರಾಮ್ ಗ್ರೂಪ್‌ಗಳಿಗೆ ಅಪ್‌ಲೋಡ್ ಮಾಡಿ ಪ್ರಚಾರ ಮಾಡುತ್ತಿದ್ದ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments