Homeಲೈಫ್‌ ಸ್ಟೈಲ್ವೆಬ್‌ ಸ್ಟೋರಿಸ್ನಿನ್ನೆ ರಾತ್ರಿ ನಡೆದ ಜಗಳ ಅಕ್ಕಪಕ್ಕದವರಿಗೆ ಹೇಗೆ ಗೊತ್ತು?

ನಿನ್ನೆ ರಾತ್ರಿ ನಡೆದ ಜಗಳ ಅಕ್ಕಪಕ್ಕದವರಿಗೆ ಹೇಗೆ ಗೊತ್ತು?

ಮನೆಯ ಒಳಗಿನ ವಿಷಯಗಳು, ಅದರಲ್ಲೂ ವಿಶೇಷವಾಗಿ ಗಂಡ-ಹೆಂಡತಿಯ ನಡುವೆ ನಡೆಯುವ ವೈಯಕ್ತಿಕ ಸಂಭಾಷಣೆಗಳು, ಸಣ್ಣಪುಟ್ಟ ಜಗಳಗಳು, ನಾಲ್ಕು ಗೋಡೆಗಳ ಮಧ್ಯೆ ಇದ್ದರೆನೇ ಚಂದ ಆಕಸ್ಮಾತ್ ಆಗಿ ಇವರಿಬ್ಬರ ನಡುವೆ ನಡೆದ ಆ ಮಾತುಗಳು ಮನೆಯಿಂದ ಹೊರಗೆ ಹೋದರೆ ಅದು ದಾಂಪತ್ಯ ಜೀವನದ ನೆಮ್ಮದಿಯನ್ನೇ ಕೆಡಿಸಬಹುದು.

ದಾಂಪತ್ಯ ಜೀವನದಲ್ಲಿ ಪತಿ-ಪತ್ನಿಯ ನಡುವೆ ಸಣ್ಣಪುಟ್ಟ ವಾದ-ವಿವಾದಗಳು ಹಾಗೂ ಜಗಳಗಳು ನಡೆಯುವುದು ಸಹಜ. ಮುಚ್ಚಿದ ಕೋಣೆಯೊಳಗಿನ ಮಾತುಗಳು ನೆರೆಹೊರೆ ಯವರಿಗೆ ಕೇಳಿಸಿವೆ ಎಂದು ಗೊತ್ತಾದಾಗ ತೀವ್ರ ಮುಜುಗರ, ಅಸಹಾಯಕತೆ ಉಂಟಾಗುವುದು ಸಹಜ.

ಇದಕ್ಕಿಂತ ಹೆಚ್ಚಾಗಿ ನಾಲ್ಕು ಗೋಡೆಗಳ ನಡುವೆ ನಡೆದ ವಿಷಯವು ಹೊರಗೆ ಹೇಗೆ ತಿಳಿಯಿತು ಎಂದು ಅಚ್ಚರಿಯೂ ಕೂಡ ಆಗುತ್ತೆ! ಗೋಡೆಗಳಿಗೂ ಕಿವಿ ಇರುತ್ತವೆ ಎಂಬ ಗಾದೆಯಂತೆ, ನಾವು ಮಾತನಾಡುವಾಗ ಯಾರಾದರೂ ಕದ್ದು ಕೇಳುತ್ತಿರಬಹುದು ಅಥವಾ ನಮ್ಮ ಮನೆಯ ಬೇರೆಯವರ ಮುಂದೆ ಬಾಯಿ ಬಿಟ್ಟಿರಬಹುದು.

ಒಂದು ವೇಳೆ ನೆರೆಹೊರೆಯವರು ಇದ್ದಕ್ಕಿದ್ದಂತೆ ಬಂದು, “ನಿನ್ನೆ ರಾತ್ರಿ ನಿಮ್ಮ ಪತಿ ನಿಮ್ಮನ್ನು ಬೈದರು ಎಂದು ಕೇಳಿದೆ?” ಅಥವಾ “ವಾರಾಂತ್ಯದಲ್ಲಿ ನೀವು ನಿಮ್ಮ ತವರು ಮನೆಗೆ ಹೋಗುತ್ತಿದ್ದೀರಾ?” ಎಂದು ಕೇಳಿದರೆ, ಅದು ಒಂದು ದೊಡ್ಡ ಎಚ್ಚರಿಕೆಯ ಸಂಕೇತ. ಕೇವಲ ನಿಮ್ಮ, ನಿಮ್ಮ ಪತಿ ಮತ್ತು ನಿಮ್ಮ ಅತ್ತೆಯ ನಡುವೆ ನಡೆದ ಮಾತುಕತೆಗಳು ನೆರೆಹೊರೆಯವರಿಗೆ ತಲುಪುತ್ತಿದ್ದರೆ, ನಿಮ್ಮ ಮನೆಯ ವಿಷಯಗಳು ಹೊರಗೆ ನೇರ ಪ್ರಸಾರವಾಗುತ್ತಿವೆ ಎಂದೇ ಅರ್ಥ.

ಒಂದು ವೇಳೆ ಈ ರೀತಿಯ ಸನ್ನಿವೇಶ ಎದುರಾದರೆ ಮೊದಲು ಕೋಪಗೊಳ್ಳಬೇಡಿ, ಇದು ನಮ್ಮ ಸಂಸಾರದ ವೈಯಕ್ತಿಕ ವಿಷಯ, ದಯವಿಟ್ಟು ಇದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಗೌರವಯುತವಾಗಿ ತಿಳಿಸಿ.

ನಿಮ್ಮ ಅತ್ತೆ ಮನೆಯ ಹೊರಗೆ ಅಥವಾ ಬಾಲ್ಕನಿಯಲ್ಲಿ ತಮ್ಮ ಸ್ನೇಹಿತೆಯ ರೊಂದಿಗೆ ಸಂತೋಷದಿಂದ ಹರಟೆ ಹೊಡೆಯುತ್ತಿರುತ್ತಾರೆ. ಆದರೆ ನೀವು ಅಲ್ಲಿಗೆ ಬಂದಾಗ ಅಥವಾ ಅಲ್ಲಿಂದ ಹಾದುಹೋದಾಗ,

ಎಲ್ಲರೂ ಇದ್ದಕ್ಕಿದ್ದಂತೆ ಮೌನ ವಾಗುತ್ತಾರೆ ಅಥವಾ ತರಾತುರಿಯಲ್ಲಿ ವಿಷಯ ವನ್ನು ಬದಲಾಯಿಸುತ್ತಾರೆ. ಈ ರೀತಿಯ ನಿಗೂಢ ಮೌನವು, ನೀವೇ ಅವರ ಚರ್ಚೆಯ ವಿಷಯವಾಗಿದ್ದಿರಿ ಎಂಬು ದಕ್ಕೆ ಖಚಿತವಾದ ಸೂಚನೆಯಾಗಿದೆ.
ಈ ರೀತಿಯ ಘಟನೆಯನ್ನು ಮನಸ್ಸಿಗೆ ಹಚ್ಚಿಕೊಂಡು ಅವರೊಂದಿಗೆ ಕೋಪ ಮಾಡಿಕೊಳ್ಳಬೇಡಿ ಅಥವಾ ದೂರ ಉಳಿಯಬೇಡಿ. ಮನೆಯಲ್ಲಿ ಅತ್ತೆಯವರು ಒಬ್ಬರೇ ಇರುವಾಗ ಪ್ರೀತಿಯಿಂದ, ಅತ್ತೆ, ಅಂದು ನಾನು ಬಂದಾಗ ಎಲ್ಲರೂ ಯಾಕೆ ಸುಮ್ಮನಾದ್ರಿ?

ನಾನೇನಾದರೂ ತಪ್ಪು ಮಾಡಿದ್ದೇನಾ ಅಥವಾ ತೊಂದರೆ ಆಯ್ತಾ? ನನ್ನಲ್ಲಿ ಯಾಕೆ ಮುಚ್ಚುಮರೆ? ಏನೇ ಸಮಸ್ಯೆ ಇದ್ದರೂ ನನ್ನ ಬಳಿ ಮುಕ್ತವಾಗಿ ಮಾತನಾಡಿ ಎಂದು ಶಾಂತವಾಗಿ ಕೇಳಿ. ಇದು ತಪ್ಪು ತಿಳುವಳಿಕೆಯನ್ನು ದೂರ ಮಾಡುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments