Homeಸಿನಿಮಾರಾಮಾಯಣ ಸೆಟ್ ನಲ್ಲಿ ಭಾರೀ ಅಗ್ನಿ ದುರಂತ.. ಏನಾಯ್ತು?

ರಾಮಾಯಣ ಸೆಟ್ ನಲ್ಲಿ ಭಾರೀ ಅಗ್ನಿ ದುರಂತ.. ಏನಾಯ್ತು?

ಮುಂಬೈನ ಗೋರೆಗಾಂವ್‌ನಲ್ಲಿರುವ ಫಿಲ್ಮ್ ಸಿಟಿಯಲ್ಲಿ ನಿರ್ಮಿಸಲಾಗಿದ್ದ ನಿತೇಶ್ ತಿವಾರಿ ನಿರ್ದೇಶನದ, ರಣಬೀರ್ ಕಪೂರ್, ಯಶ್ತ್ ಮತ್ತು ಸಾಯಿ ಪಲ್ಲವಿ ಮುಖ್ಯ ಭೂಮಿಕೆಯಲ್ಲಿರುವ ‘ರಾಮಾಯಣ’ ಚಿತ್ರದ ತ ಶೂಟಿಂಗ್ ಸೆಟ್‌ನಲ್ಲಿ ಸೋಮವಾರ ಸಂಜೆ ಅಗ್ನಿ ಅವಘಡ ಸಂಭವಿಸಿದೆ.ಅದೃಷ್ಟವಶಾತ್, ಈ ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಪ್ರಾಣಾಪಾಯ ಅಥವಾ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

ಸ್ಟುಡಿಯೋದ ಹೊರಭಾಗದಲ್ಲಿದ್ದ ತಾತ್ಕಾಲಿಕ ಟೆಂಟ್‌ ನಲ್ಲಿರುವ ಪ್ರೊಡಕ್ಷನ್ ಕಂಟ್ರೋಲ್ ರೂಮ್ (PCR) ಯುನಿಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಎಲೆಕ್ಟ್ರಿಕಲ್ ವೈರಿಂಗ್ ಸಮಸ್ಯೆಯಿಂದಾಗಿ ಈ ಅಗ್ನಿ ಅವಘಡ ಉಂಟಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಅಗ್ನಿ ದುರಂತ ಸಂಭವಿಸಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಮುಂಬೈ ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ಒಂದು ಗಂಟೆ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತಂದಿದ್ದಾರೆ.

ಬೆಂಕಿಯ ಕೆನ್ನಾಲಿಗೆಗೆ ಎಲೆಕ್ಟ್ರಿಕಲ್ ವೈರಿಂಗ್, ಕೇಬಲ್‌ಗಳು, ಎಸಿ ಯುನಿಟ್‌ಗಳು ಮತ್ತು ಕೆಲವು ಶೂಟಿಂಗ್ ಪರಿಕರಗಳು ಹಾನಿಗೊಳಗಾಗಿವೆ. ಚಿತ್ರದ ಸೆಟ್‌ನಲ್ಲಿ ದಟ್ಟವಾದ ಹೊಗೆ ಆವರಿಸಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇತರ ಸೆಟ್‌ಗಳಿಗೂ ವ್ಯಾಪಿಸಿದ ಬೆಂಕಿ
ಈ ಬೆಂಕಿಯ ತೀವ್ರತೆಯಿಂದಾಗಿ ಪಕ್ಕದಲ್ಲೇ ಇದ್ದ ‘ಎಂಟಿವಿ ಹಸ್ಲ್ 5’ ಹಾಗೂ ‘ಪತಿ ಪತ್ನಿ ಔರ್ ಪಂಗಾ 2’ ಶೂಟಿಂಗ್ ಸೆಟ್‌ಗಳಿಗೂ ಸಣ್ಣ ಪ್ರಮಾಣದಲ್ಲಿ ಬಿಸಿ ತಟ್ಟಿದೆ ಎಂದು ವರದಿಯಾಗಿದೆ.

ಸದ್ಯ ಶೂಟಿಂಗ್ ಸ್ಥಳದಲ್ಲಿ ಎಲ್ಲವೂ ನಿಯಂತ್ರಣದಲ್ಲಿದ್ದು, ನಟ-ನಟಿಯರು ಹಾಗೂ ತಾಂತ್ರಿಕ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ

ಫೆಡರೆಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನೆ ಎಂಪ್ಲಾಯೀಸ್ (FWICE) ಅಧ್ಯಕ್ಷ ಬಿ.ಎನ್. ತಿವಾರಿ ಅವರು ಪ್ರತಿಕ್ರಿಯಿಸಿ ಸೆಟ್‌ನಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತೊಮ್ಮೆ ಪ್ರೊಡಕ್ಷನ್ ತಂಡಗಳಿಗೆ ಎಚ್ಚರಿಕೆ ನೀಡಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments